Pages

Astroworld

Tuesday, January 30, 2018

ನಿಮ್ಮ ನಕ್ಷತ್ರಕ್ಕನುಗುಣವಾಗಿ ಗಿಡಗಳನ್ನು ಬೆಳೆಸಿದರೆ ಗ್ರಹದೋಷ ನಿವಾರಣೆಯಾಗುತ್ತದೆ



ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ಮರಗಿಡಗಳನ್ನು ನಿಮ್ಮ ನಕ್ಷತ್ರಕ್ನುಗುಣವಾಗಿ ನೆಟ್ಟರೆ ಗ್ರಹದೋಷ ನಿವಾರಣೆಯಾಗುತ್ತದೆ. ಅದಕ್ಕಾಗಿಯೇ ಇತ್ತಿಚೆಗೆ ನವಗ್ರಹ ವನ, ದೇವವನಗಳ ಸಂಖ್ಯೆ ಹೆಚ್ಚುತ್ತಿದೆ. ಕಟ್ಟಡಗಳ ನಿರ್ಮಾಣಕ್ಕಾಗಿ ಈಗ ಮರಗಿಡಗಳನ್ನು ಕಡಿದುಹಾಕುತ್ತಿದ್ದಾರೆ.

ಜ್ಯೋತಿಷ್ಯಶಾಸ್ತ್ರದಲ್ಲಿ ನಕ್ಷತ್ರಕ್ಕನುಸಾರವಾಗಿ ಯಾವ ಗಿಡಗಳನ್ನು ನೆಟ್ಟರೆ ಉತ್ತಮವೆಂಬುದನ್ನು ತಿಳಿಸಿದ್ದಾರೆ. ಅಶ್ವಿನಿ, ಮಘ, ಮೂಲಾ ನಕ್ಷತ್ರಗಳಿಗೆ  ಕೇತುಗ್ರಹ ಅಧಿಪತಿಯಾಗಿರುವುದರಿಂದ ದರ್ಬೆ ಹಾಗು ಜಾಜಿಗಿಡವನ್ನು ಮನೆಯಲ್ಲಿ ನೆಟ್ಟು ಬೆಳೆಸಿದರೆ ಕೇತು ದೋಷ ನಿವಾರಣೆಯಾಗುತ್ತದೆ. ಭರಣಿ, ಪುಬ್ಬ, ಪೂರ್ವಾಷಾಡ ನಕ್ಷತ್ರಗಳಿಗೆ ಶುಕ್ರಗ್ರಹ ಅಧಿಪತಿಯಾಗಿರುವುದರಿಂದ ಔದಂಬರ, ಕಮಲದ ಗಿಡಗಳನ್ನು ಬೆಳೆಸಿದರೆ ಶುಕ್ರಗ್ರಹದ ದೋಷ ನಿವಾರಣೆಯಾಗುತ್ತದೆ. ಕೃತಿಕಾ, ಉತ್ತರ, ಉತ್ತರಾಷಾಢ ನಕ್ಷತ್ರಗಳಿಗೆ ಸೂರ್ಯ ಅಧಿಪತಿಯಾಗಿದ್ದು, ದೋಷ ನಿವಾರಣೆಗೆ ಬಿಳಿ ಎಕ್ಕೆಯ ಹಾಗು ಕನಕಾಂಬರ ಹೂವಿನ ಗಿಡಗಳನ್ನು ನೆಡಬೇಕು. ರೋಹಿಣಿ, ಹಸ್ತ, ಶ್ರವಣ ನಕ್ಷತ್ರಗಳಿಗೆ ಚಂದ್ರಗ್ರಹ ಅಧಿಪತಿಯಾಗಿರುವುದರಿಂದ  ಮತ್ತುಂಗ ಮರ ಹಾಗು ಬಿಳಿತಾವರೆ ಗಿಡಗಳನ್ನು ನೆಟ್ಟರೆ ಚಂದ್ರಗ್ರಹ ದೋಷ ಪರಿಹಾರವಾಗುತ್ತದೆ.

ಮೃಗಶಿರ, ಚಿತ್ತ, ಧನಿಷ್ಠ ನಕ್ಷತ್ರಗಳಿಗೆ ಅಧಿಪತಿ ಕುಜ ಗ್ರಹವಾಗಿರುವುದರಿಂದ  ಅದರ ದೋಷ ನಿವಾರಣೆಗೆ ಕಗ್ಗಲಿ ಮರ ಹಾಗು ದತ್ತುರಿ ಹೂವಿನ ಗಿಡಗಳನ್ನು ನೆಡಬೇಕು. ಆರಿದ್ರಾ, ಸ್ವಾತಿ, ಶತಭಿಷ ನಕ್ಷತ್ರಗಳಿಗೆ ರಾಹುಗ್ರಹ ಅಧಿಪತಿಯಾಗಿರುವುದರಿಂದ ಗರಿಕೆಯನ್ನು ಹಾಗು ಬೆಟ್ಟದಾವರೆ ಹೂವಿನ ಗಿಡಗಳನ್ನು ನೆಟ್ಟರೆ ರಾಹುದೋಷ ನಿವಾರಣೆಯಾಗುತ್ತದೆ. ಪುನರ್ವಸು, ವಿಶಾಖ, ಪೂರ್ವಭಾದ್ರಪದ ನಕ್ಷತ್ರಗಳಿಗೆ ಗುರು ಗ್ರಹ ಅಧಿಪತಿಯಾಗಿರುವುದರಿಂದ ಅದರ ದೋಷ ನಿವಾರಣೆಗೆ ಅರಳಿ ಹಾಗು ಪಾರಿಜಾತ ಗಿಡಗಳನ್ನು ಬೆಳೆಸಬೇಕು. ಪುಷ್ಯ, ಅನುರಾಧ, ಉತ್ತರಭಾದ್ರಪದ ನಕ್ಷತ್ರಗಳಿಗೆ ಶನಿಗ್ರಹ ಅಧಿಪತಿಯಾಗಿರುವುದರಿಂದ ಶನಿವೃಕ್ಷ ಹಾಗು ತುಳಸಿ ಗಿಡವನ್ನು ನೆಟ್ಟರೆ ಶನಿದೋಷ ನಿವಾರಣೆಯಾಗುತ್ತದೆ. ಆಶ್ಲೇಷ, ಜ್ಯೇಷ್ಠ, ರೇವತಿ ನಕ್ಷತ್ರಗಳಿಗೆ ಬುಧಗ್ರಹ ಅಧಿಪತಿಯಾಗಿರುವುದರಿಂದ ಉತ್ತರೆಣಿ ಗಿಡಗಳನ್ನು ಹಾಗು ಮಲ್ಲಿಗೆ ಗಿಡಗಳನ್ನು ನೆಡಬೇಕು.

ಸೂರ್ಯ ಹಾಗು ಚಂದ್ರನನ್ನು ಈ ಸಮಯದಲ್ಲಿ ಯಾವತ್ತೂ ನೋಡಬೇಡಿ!



ವ್ಯಕ್ತಿಯ ಜೀವನದಲ್ಲಿ ಸೂರ್ಯ ಹಾಗು ಚಂದ್ರನ ಪಾತ್ರ ಮಹತ್ವವಾದುದು. ಈ ಗ್ರಹಗಳ ದೋಷದಿಂದ ಅಸಾಧ್ಯವಾದ ರೋಗ ಕಾಡಲು ಶುರುವಾಗುತ್ತದೆ. ಸೂರ್ಯ ದೋಷದಿಂದ ತಲೆನೋವು, ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆ, ಜ್ವರ, ನೌಕರಿಯಲ್ಲಿ ತೊಂದರೆ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತದೆ. ಚಂದ್ರನ ದೋಷದಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆ, ಧನಹಾನಿ, ಖಿನ್ನತೆ ಕಾಡುತ್ತಿರುತ್ತದೆ. 


ಶಾಸ್ತ್ರದ ಪ್ರಕಾರ ಸೂರ್ಯ ಹಾಗು ಚಂದ್ರನನ್ನು ಕೆಲವು ಸಮಯದಲ್ಲಿ ನೋಡಬಾರದು. ಇದು ಕೂಡ  ದೋಷಕ್ಕೆ ಕಾರಣವಾಗುತ್ತದೆ. ಸೂರ್ಯ ಹಾಗು ಚಂದ್ರನನ್ನು ಮುಳುಗುವ ಸಮಯದಲ್ಲಿ ನೋಡಬಾರದು. ಇದರಿಂದ ಕಣ್ಣಿನ ಸಮಸ್ಯೆ ಕಾಡುತ್ತದೆ. ಇದನ್ನು ಶಾಸ್ತ್ರದಲ್ಲಿ ಕೂಡ ಅಪಶಕುನವೆಂದು ಪರಿಗಣಿಸಲಾಗಿದೆ. ಆದರೆ ಸೂರ್ಯ ಉದಯಿಸುವುದನ್ನು ನೋಡಿದರೆ ಮಾತ್ರ ಒಳ್ಳೆಯದು. ಸೂರ್ಯ ಉದಯಿಸಿದ ಮೇಲೂ ಮಲಗುವವರಿಗೆ ಲಕ್ಷ್ಮೀ ಕಟಾಕ್ಷ ದೊರೆಯುವುದಿಲ್ಲ. ಹಾಗೆ ಚಂದ್ರನನ್ನು ಹುಣ್ಣಿಮೆ ದಿನ ನೋಡಿದರೆ ಒಳ್ಳೆಯದು. ಅಂದು ಚಂದ್ರನಿಗೆ ಪೂಜೆ ಸಲ್ಲಿಸಿದರೆ ಜೀವನ ಮಂಗಳಕರವಾಗುತ್ತದೆ.

ಯಾವ ದಾನದಿಂದ ಏನು ಫಲ ದೊರೆಯುತ್ತದೆ?


ಮನುಷ್ಯ ದಾನ ಮಾಡಬೇಕು ಎಂದು ಪುರಾಣಗಳು ಹೇಳುತ್ತವೆ. ನಾವು ಮಾಡುವ ದಾನ ಅವರಿಗೆ ಉಪಯೋಗವಾಗುವಂತೆ ಇರಬೇಕು. ಯಾವ ವಸ್ತುಗಳನ್ನು ದಾನ ಮಾಡಿದರೆ ಏನು ಫಲ ಸಿಗುತ್ತದೆ ಎಂದು ಮೊದಲು ತಿಳಿಯೋಣ.
  1. 1. ವಸ್ತ್ರ ದಾನ – ಆಯಸ್ಸು ವೃದ್ಧಿಯಾಗುತ್ತದೆ.
    2. ಭೂ ದಾನ – ಬ್ರಹ್ಮ ಲೋಕ ಪ್ರಾಪ್ತಿ
    3. ಜೇನು ದಾನ – ಇದನ್ನು ಕಂಚಿನ ಪಾತ್ರೆಯಲ್ಲಿ ನೀಡಬೇಕು – ಪುತ್ರ ಭಾಗ್ಯ
    4. ಗೋದಾನ – ಋಷಿ ದೇವ ಪಿತೃ ಪ್ರೀತಿ
    5. ಬೆಟ್ಟದನೆಲ್ಲಿ ಕಾಯಿ ದಾನ – ಜ್ಞಾನ ಪ್ರಾಪ್ತಿ
    6.ದೇವಾಲಯದಲ್ಲಿ ದೀಪ ದಾನ – ಚಕ್ರವರ್ತಿ ಪದವಿ ಎಂದರೆ ಜೀವನದಲ್ಲಿ ಅತ್ಯುನ್ನದ ಪದವಿ ಪ್ರಾಪ್ತಿ
    7. ದೀಪ ದಾನ – ಲೋಪ ಹರಣ
    8. ಬೇಳೆ ಕಾಳಿನ ದಾನ – ದೀರ್ಘಾಯುಸ್ಸು ಸಿದ್ಧಿ
    9.ಅಕ್ಕಿ – ಎಲ್ಲಾ ವಿಧವಾದ ಪಾಪ ನಾಶ
    10. ತಾಂಬೂಲ – ಸ್ವರ್ಗ ಪ್ರಾಪ್ತಿ
    11. ಕಂಬಳಿ ದಾನ – ವಾಯುರೋಗ ನಾಶ
    12. ಹತ್ತಿ ದಾನ – ಕುಷ್ಠ ರೋಗ ನಿವಾರಣೆ
    13. ಜನಿವಾರ ದಾನ – ಬ್ರಾಹ್ಮಣ ಜನ್ಮ ಲಭಿಸುತ್ತದೆ
    14. ತುಲಸಿ ಪುಷ್ಪ – ಸ್ವರ್ಗ ಪ್ರಾಪ್ತಿ
    15. ತುಪ್ಪ ದಾನ – ರೋಗ ನಿವಾರಣೆ

ಲಕ್ಷ್ಮೀದೇವಿ ಒಲಿಯಬೇಕೆ? ಈ ಹೂವಿನಿಂದ ಪೂಜಿಸಿ.



ನಾವು ಪ್ರತಿನಿತ್ಯ ದೇವರಿಗೆ ಪೂಜೆ ಮಾಡುತ್ತೆವೆ. ಕೆಲವರು ಲಕ್ಷ್ಮೀದೇವಿಗೆ ಪೂಜೆ ಮಾಡಿದರೆ ಆಕೆ ಒಲಿಯುತ್ತಾಳೆ, ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ ಎಂದು ಹೇಳುತ್ತಾರೆ. ಆದರೆ ಲಕ್ಷ್ಮೀ ಪೂಜೆ ಮಾಡಿದರೂ ಕೆಲವರಿಗೆ ಕಷ್ಟಕಾಲ ದೂರವಾಗುವುದಿಲ್ಲ. ಏಕೆಂದರೆ ನಮಗೆ ತಿಳಿಯದೆ ಮಾಡುವ ಒಂದು ತಪ್ಪು ಏನೆಂದರೆ ನಾವು ಮಾಡಿರುವ ಲಕ್ಷ್ಮೀ ಪೂಜೆ ಪೂರ್ಣವೇ ಆಗಿರುವುದಿಲ್ಲ. ಏಕೆಂದರೆ ಲಕ್ಷ್ಮೀದೇವಿಯನ್ನು ಪೂಜಿಸುವಾಗ ಒಂದು ಹೂವನ್ನು ಅರ್ಪಿಸಲೇ ಬೇಕು. ಇಲ್ಲವಾದರೆ ಲಕ್ಷ್ಮೀ ಒಲಿಯುವುದಿಲ್ಲ ಎಂದು ಪಂಡಿತರು ಹೇಳುತ್ತಾರೆ.

ಲಕ್ಷ್ಮೀ ಪೂಜೆ ಮಾಡುವಾಗ ಏನು ಇಡದಿದ್ದರೂ ಪರವಾಗಿಲ್ಲ.ಆದರೆ ಕಮಲದ ಹೂವನ್ನು ಮಾತ್ರ ಇಡಲೇಬೇಕು. ಅದರಲ್ಲೂ ಶುಕ್ರವಾರ ಏಕದಶಿಯ ದಿನ ಒಂದಾದರು ಕಮಲದ ಹೂವನ್ನು ಲಕ್ಷ್ಮೀದೇವಿಗೆ ಅರ್ಪಿಸಿದರೆ  ಆಕೆ ಸದಾ ನಿಮ್ಮ ಮನೆಯಲ್ಲಿ ನೆಲೆಸಿರುತ್ತಾಳೆ ಎಂದು ಪಂಡಿತರು ಹೇಳುತ್ತಾರೆ.